Friday 15 December 2023

ಜಾನಪದ ಸುದ್ದಿ ಸಂಚಯ- 15- ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ-ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಭರವಸೆ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಉನ್ನತ ಶಿಕ್ಷಣ  ಸಚಿವರಾದ ಡಾಎಂ.ಸಿ.  ಸುಧಾಕರ್ ಭರವಸೆ.

Please go through the Twitter account and follow the minister.

https://twitter.com/drmcsudhakar/status/1734824250098495509?cn=ZmxleGlibGVfcmVjcw%3D%3D&refsrc=email



ಜಾನಪದ ಸುದ್ದಿ ಸಂಚಯ- 14- ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಶಾಸಕ ಪ್ರಸಾದ ಅಬ್ಬಯ್ಯಅವರ ಪ್ರಶ್ನೆಗಳಿಂದಾಗಿ ವಿಧಾನಸಭೆಯಲ್ಲಿ ಸಂಚಲನ.

 ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಶಾಸಕ ಪ್ರಸಾದ ಅಬ್ಬಯ್ಯಅವರ ಪ್ರಶ್ನೆಗಳಿಂದಾಗಿ ವಿಧಾನಸಭೆಯಲ್ಲಿ ಸಂಚಲನ. (Courtesy: News First Kannada)








ಜಾನಪದ ಸುದ್ದಿ ಸಂಚಯ- 13-ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿ-ನ್ಯಾಯಾಂಗ ತನಿಖೆಗೆ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರ ಭರವಸೆ -ಹೋರಾಟ ತಾತ್ಕಾಲಿಕವಾಗಿ ಸ್ಥಗಿತ

 

ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕಿನ   ಗೊಟಗೋಡಿಯಲ್ಲಿರುವ  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿಯನ್ನು ರದ್ದುಪಡಿಸಿ,  ನ್ಯಾಯಾಂಗ ತನಿಖೆ ಮತ್ತು ಮರು ನೇಮಕಾತಿಗೆ ಒತ್ತಾಯಿಸಿ ಕಳೆದ ಹನ್ನೊಂದು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಅನಿರ್ಧಿಷ್ಟಾವಧಿ ಹೋರಾಟವನ್ನು ಉನ್ನತ ಶಿಕ್ಷಣ  ಸಚಿವರಾದ ಡಾ. ಎಂ.ಸಿ.  ಸುಧಾಕರ್ ಅವರ  ಕರೆಯ ಮೇರೆಗೆ ಬೆಳಗಾವಿಗೆ ತೆರಳಿದ ಹೋರಾಟಗಾರರ ನಿಯೋಗ, ಸಚಿವರೊಂದಿಗೆ ಸುದೀರ್ಘ  ಸಮಾಲೋಚನೆ ನಡೆಸಿದ ನಂತರ ಸಚಿವರು ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ನ್ಯಾಯಾಂಗ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರಿಂದ ಇಂದು( 14-12-2023, ಗುರುವಾರ)   ಈ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.

ನಿನ್ನೆ (ಗುರುವಾರ)  ಹೋರಾಟಗಾರರ ನಿಯೋಗದೊಂದಿಗೆ ಬೆಳಗಾವಿಗೆ ತೆರಳಿ, ಉನ್ನತ ಶಿಕ್ಷಣ ಸಚಿವರಾದ  ಡಾ. ಎಂ.ಸಿ.  ಸುಧಾಕರ್ ಅವರನ್ನು ಭೇಟಿ ಮಾಡಿ, ಅಕ್ರಮದ ಕುರಿತಾದ ಸಮಗ್ರ ಮಾಹಿತಿಯುಳ್ಳ ದಾಖಲೆಯನ್ನು ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಸಚಿವರು, ಅಕ್ರಮದ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ  ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.



Monday 11 December 2023

ಜಾನಪದ ಸುದ್ದಿ ಸಂಚಯ- 11 - ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದತಿಗಾಗಿ ಇಂದು(12 ನೇ ಡಿಸೆಂಬರ್ 2023) ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ.

 

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ ಮತ್ತು ಮರುನೇಮಕಾತಿಗೆ ಆಗ್ರಹಿಸಿ  ಧಾರವಾಡದ ವಿವಿಧ ಸಂಘಟನೆಗಳು ಬೆಳಗಾವಿಯ ಸುವರ್ಣ ವಿಧಾನಸೌಧದ  ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಈ ಕುರಿತು ಸರ್ಕಾರದ ಗಮನ ಸೆಳೆದು, ಮಾನ್ಯ ಮುಖ್ಯಮಂತ್ರಿ ಮತ್ತು ಉನ್ನತ ಶಿಕ಼ಣ ಸಚಿವರಿಗೆ ಮನವಿ ಸಲ್ಲಿಸಲಿದ್ದಾರೆ.




ಜಾನಪದ ಸುದ್ದಿ ಸಂಚಯ- 10 - ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದತಿಗಾಗಿ ಇಂದು(11ನೇ ಡಿಸೆಂಬರ್ 2023) ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಟಿ. (ಕೃಪೆ: ಸಂಯುಕ್ತ ಕರ್ನಾಟಕ)

 

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ ಮತ್ತು ಮರುನೇಮಕಾತಿಗೆ ಆಗ್ರಹಿಸಿ   ವಿವಿಧ ಸಂಘಟನೆಗಳ ಪದಾಧಿಕಾರಿಗಳು  ಸೇರಿ ಇಂದು (11ನೇ ಡಿಸೆಂಬರ್ 2023)  ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದರು.

                                                     (ಕೃಪೆ: ಸಂಯುಕ್ತ ಕರ್ನಾಟಕ)

ಜಾನಪದ ಸುದ್ದಿ ಸಂಚಯ- 9- ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದತಿಗಾಗಿ ನಡೆಯುತ್ತಿರುವ ಅಹೋರಾತ್ರಿ ಹೋರಾಟಕ್ಕೆ ಡಿ.ಎಸ್. ಮಾಳಗಿ ಬೆಂಬಲ

 

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ ಮತ್ತು ಮರುನೇಮಕಾತಿಗೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸೂಕ್ತ ನಿರ್ಣಯ ಮಾಡುವಂತೆ ಆಗ್ರಹಿಸಿ, ಕಳೆದ ದಿನಾಂಕ 5ನೇ ಡಿಸೆಂಬರ್ 2023 ರಿಂದ  ನಡೆಸಲಾಗುತ್ತಿರುವ  ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟವನ್ನು ಖಂಡಿಸಿ ಮೊನ್ನೆ ಪತ್ರಿಕಾ ಹೇಳಿಕೆ ನೀಡಿದ್ದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ಼ ಡಿ.ಎಸ್. ಮಾಳಗಿ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ಸದರಿ ಹೋರಾಟಕ್ಕೆ ತಮ್ಮ ಸಂಪೂರ್ಣ  ಬೆಂಬಲ ನೀಡಿದ್ದಾರೆ.

ಜಾನಪದ ವಿಶ್ವವಿದ್ಯಾಲಯದ ಅಧಿಕಾರಿಗಳು ತಮಗೆ ಸುಳ್ಳು ಮಾಹಿತಿ ನೀಡಿದ್ದರು: ಇಂದು (11ನೇ ಡಿಸೆಂಬರ್ 2023)ಮುಂಜಾನೆ ಧರಣಿ ನಿರತ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತು ಸಹಾಯಕ ಕುಲಸಚಿವರು ತಮಗೆ ತಪ್ಪು ಮಾಹಿತಿ ನೀಡಿ ನಿಮ್ಮ ಹೋರಾಟವನ್ನು ಖಂಡಿಸಲು ಮನವಿ ಮಾಡಿದ್ದರಿಂದ ನಾನು ಆ ರೀತಿ ಹೇಳಿಕೆ ನೀಡಿದ್ದೆ.

ತಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ : ಈಗ ನನಗೆ ವಸ್ತುಸ್ಥಿತಿ ಸಂಪೂರ್ಣವಾಗಿ ಅರ್ಥವಾಗಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದು ಗೊತ್ತಾಗಿದೆ. ಆದ್ದರಿಂದ ನನ್ನ ಮೊನ್ನೆಯ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡು ತಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದರು. ಇದೇ ಸಂದರ್ಬದಲ್ಲಿ ಜಾನಪದ ವಿಶ್ವವಿದ್ಯಾಲಯದ  ಅಧಿಕಾರಿಗಳ ಈ ಬಗೆಯ ವರ್ತನೆಗಳನ್ನು ಖಂಡಿಸಿದರು.